?

Log in

No account? Create an account

prathidhwani

Recent Entries

prathidhwani

View

April 27th, 2008

ಯಾವಕಾಲದಲ್ಲೂ ನಾನು ದೇವೇ ಗೌಡರ ಅಭಿಮಾನಿಯಲ್ಲ. ಯಾವತ್ತಿದ್ರು, ಯಾವುದಲ್ಲಾದರೂ ಅವರು ಸೊಲಬೇಕು ಎಂಬುದೇ ನನ್ನ ಇಚ್ಚೆ. ಈಗ ಹೊಸ ಸುದ್ಧಿಯೇನು ಅಂದರೆ, ಗೌಡರು ಮತ್ತು ಅವರ ಪರಿವಾರದವರು ಹೆಂಗಸರ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎಂದು ಅವರ ಜಾತಕದಲ್ಲಿ ಬರೆದಿದೆಯಂತೆ. ಇದೇ ಕಾರಣ ೨೦೦೪(2004)ನ ಚುನಾವಣೆಯಲ್ಲಿ ತೇಜಸ್ವಿ ಶ್ರೀರಮೆಶ್ ಅವರ ವಿರುದ್ಧ ದೇವೇ ಗೌಡರು ಪರಾಜಯರಾದರಂತೆ! ಇನ್ನು ಮಹತ್ವದ ವಿಷಯ ಅಂದರೆ, ಕಾಂಗ್ರಸ್ ಪಕ್ಷದವರು ಗೌಡರ ಮಕ್ಕಳು, ಕುಮಾರಸ್ವಮಿ ಹಾಗೂ ರೇವಣ್ಣ, ಇಬ್ಬರ ವಿರುದ್ಧ ಮುಂದಿನ ರಾಜ್ಯ ಸರ್ಕಾರದ ಚುನಾವಣೆಯಲ್ಲಿ, ದಿ. ರಾಮಕೃಷ್ಣ ಹೆಗಡೆಯವರ ಮಗಳು ಮಮತ ನಿಚಣಿ ಹಾಗೂ ಎಸ್. ಜಿ. ಅನುಪಮ, ಇವರಿಬ್ಬರನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.

ಗೌಡರಿಗೆ ಹೆಂಗಸರನ್ನು ಕಂಡರೆ ಭಯ ಆಗುತ್ತೆ ಅಂಥ ನಗುವುದೋ ಅಥವ ಅದನ್ನು ಗಮನಿಸಿ ಕಾಂಗ್ರಸ್ ಅವರು ತಮ್ಮ ಚುನಾವಣಾ ಯೋಜನೆಗಳನ್ನು ನಡೆಸುತ್ತಿದ್ದಾರೆ ಎಂಬುದು ನಗುವಂಥದ್ದೋ ತಿಳಿಯುತ್ತಿಲ್ಲ. ಆದರೆ ದಿ. ಜೆ. ಎಚ್. ಪಟೇಲರ ತರಹ ಹೆಂಗಸರ ಹಿಂದೆ ಅಂಥು ಸುತ್ತಲ್ಲ ಗೌಡರು. ಗೌಡರ ಹೆಂಡತಿ ಚೆನ್ನಮ್ಮ ರಾತ್ರಿ ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು

April 12th, 2008

 ಧರ್ಮ ಎಂದರೇನು? ಸದ್ಗುಣ, ಕರ್ತವ್ಯ ಪಾಲನೆ, ಸದ್ವಿಚಾರ ಹಾಗೂ ಸಜೀವನ? ಅಥವ ಹಿಂದು, ಮುಸ್ಲಿಮ್, ಕ್ರಿಸ್ತ ಧರ್ಮಗಳಾ? ಏಕೆ Religion ಎಂಬ ಆಂಗ್ಲ ಪದಕ್ಕೆ ಕನ್ನಡದಲ್ಲಾಗಲಿ, ಸಂಸ್ಕೃತದಲ್ಲಾಗಲಿ ಯಾವ ಹಳೆಯ ಭಾರತೀಯ ಭಾಷೆಯಲ್ಲಾಗಲಿ ಒಂದು ನಿಶ್ಚಿತ ಪದವಿಲ್ಲಾ?  

ಕಾರಣ ಹಿಂದು ಧರ್ಮ ತನ್ನನ್ನು ಒಂದು Religion ಎಂದು ಭಾವಿಸಿಲ್ಲವೆಂಬುದೇ? ಧರ್ಮ ಪರಿವರ್ತನೆ ಎಂಬುದು ಎಲ್ಲಾ ಧರ್ಮಗಳಲ್ಲು ಇರುವುದು. ಬೇರೆ ಧರ್ಮದವರನ್ನು ಪರಿವರ್ತಿಸಲು ಯುದ್ಧಗಳೇ ನಡೆದಿವೆ. ಕ್ರಿಸ್ತರಲ್ಲಿ crusades, ಮುಸಲ್ಮಾನರಲ್ಲಿ ಜಿಹಾದ್ ಎಂದೆಲ್ಲಾ ಕರೆಯಲ್ಪಟ್ಟು ಅದೇ ಒಂದು ಧರ್ಮವೆಂದು ಭಾವಿಸಿದ್ದಾರೆ ಹಲವು ಶತಮಾನಗಳಿಂದ. ಆದರೇ ಆ ಕಾಲವೇ ಬೇರೆ. ತಮ್ಮ ಧರ್ಮವನ್ನು ಉಳಿಸಲು ಶಸ್ತ್ರಗಳ ಉಪಯೋಗ ಆವಶ್ಯವಾಗಿತ್ತು. ಆದರೆ ಮುಂದಿನ ಪೀಡಿಗಳು ಈ ವರ್ತಮಾನದಲ್ಲೂ ಕೂಡ, ಆ ಒಂದು ವಿಷಯವನ್ನು ಅರಿತಿಲ್ಲ.

ಈಗ ನಾನು ಬರೆಯಲು ಹೊರಟಿದ್ದು ಬೇರೆ ಧರ್ಮಗಳ ಬಗ್ಗೆ ಅಲ್ಲ. ಸಜೀವನ ಹಾಗು ಕರ್ತವ್ಯ ಪಾಲನೆಯೇ ಧರ್ಮವೆಂದರೆ, ಹಲವು ರೀತಿಯ "ಧರ್ಮಗಳು" ಹೇಗೆ ಸಾಧ್ಯ? ಹಿಂದೂ ಧರ್ಮ ತನ್ನನ್ನು ಒಂದು Religion ಎಂದು ಭಾವಿಸಿಲ್ಲ. ಒಂದು ಜೀವನದ ರೀತಿ, ಸಮಾಜ ಚಾಲನೆಗೆ ಒಂದು ರೀತಿ-ನೀತಿಯ ಪುಸ್ತಕದಂತೆ ನಡೆದಿತ್ತು. ಸಮಾಜದಲ್ಲಿ ನಾಲಕ್ಕು ವರ್ಣ, ಎಲ್ಲರಿಗೂ ನಾಲಕ್ಕು ಆಶ್ರಮಗಳು. ಮುಖ್ಯವಾಗಿ ವರ್ಣಗಳಲ್ಲಿ ಭೇದವಿರಲಿಲ್ಲ. ಕೃಷ್ಣ ಗೀತೆಯಲ್ಲಿ ಹೆಳಿದಂತೆ "ನನ್ನನ್ನು ಸೇರಲು ನಿನ್ನ ಧರ್ಮವನ್ನು ಪಾಲಿಸಬೇಕು". ಬ್ರಾಹ್ಮಣನಾದಲ್ಲಿ ವಿದ್ಯಾಭ್ಯಾಸ ಪೂಜಾಕ್ರಿಯೆಗಳು, ಕ್ಷತ್ರಿಯನಾದಲ್ಲಿ ದೇಶ-ರಾಜ್ಯ ಪಾಲನೆ, ಶೂದ್ರನಾದಲ್ಲಿ ದೈಹಿಕ ಶ್ರಮದ ಕರ್ತವ್ಯಗಳು, ವೈಶ್ಯನಾದಲ್ಲಿ ವಾಣಿಜ್ಯದಲ್ಲಿ ಪಟುತ್ವ. ಯಾರೇ ಆಗಲಿ ಒಂದು ವರ್ಣದಲ್ಲಿ ಹುಟ್ಟಿದರೆ ಅದೇ ವರ್ಣದವರಾಗಿ ಸಾಯಬೆಕು ಎಂದು ಇರಲಿಲ್ಲ.

ಆದರೆ ಇದು ಒಂದು ನಿರ್ದಿಷ್ಟ ಮಾದರಿಯಾಗಿಯೆ ಉಳಿಯಿತು.ಎಷ್ಟೊಂದು ಶತಮಾನಗಳು ಸುಲಭವಾಗಿ ತಿರುಗುತ್ತಿದ್ದ ಯಂತ್ರದಂತೆ ನಡೆದಿದ್ದರು, ಮನುಷ್ಯರ ಭಾವ-ವಿಚಾರಗಳಲ್ಲಿ ನಾನೆ ಉತ್ತಮ, ಅವನು ಕೀಳು ಎಂಬ ಭಾವನೆ ಜನ್ಮಿಸಿತು. ಆ ಕಾಲದಿಂದ ಇಂದಿನ ವರೆಗು ಆ ಭಾವನೆ ಬಿಟ್ಟಿಲ್ಲ. ಹಿಂದೂ ಧರ್ಮದಲ್ಲಿ ’ದಲಿತ’ ಎಂಬ ಪದವಿಲ್ಲ. ಹೀಗಿರುವಾಗ ಅವರು ಎಲ್ಲಿಂದ ಉಂಟಾದರು? ಒಬ್ಬ ಮನುಷ್ಯ ಇನ್ನೊಬ್ಬನನ್ನು ಮುಟ್ಟಲು ಹಿಂಜರಿದಾಗ, ಅದಕ್ಕಿಂತ ಹೀನವಾದದ್ದು ಏನಾದರು ಉಂಟೆ? ಇದೇ ಕಾರಣ ಮುಸಲ್ಮಾನರ ದಾಳಿಗಳಿಂದ, ಕ್ರಿಸ್ತರ ಶಾಂತಿಪೂರ್ವಕ ಪರಿವರ್ತನಾಪ್ರಯೋಗಗಳಿಂದ ಹಿಂದೂ ಧರ್ಮದಿಂದ ಪರಿವರ್ತಿಸಿಕೊಂಡವರು ಕೋಟ್ಯಾದಿ ಜನರಿದ್ದಾರೆ. ಇಷ್ಟೆಲ್ಲಾ ಆದರೂ ಇನ್ನೂ ನೂರು ಕೊಟಿ ಜನ ಧರ್ಮ ಪಾಲನೆ, ಕ್ಷಮಿಸಿ, ಹಿಂದೂ ಧರ್ಮ ಪಾಲನೆ ಮಾಡುವರೆಂದರೆ, ಅದಕ್ಕೆ ಕಾರಣ ಏನು? ಸಮಯದೊಂದಿಗೆ ಆಚಾರ ವಿಚಾರಗಳು ಹೊಂದಿಕೊಂಡು ಬಂದಿವೆಯೆಂಬುದೇ? ಅಥವಾ ಯಾವ ಮನುಷ್ಯನನ್ನೂ ಧರ್ಮ ಪರಿವರ್ತನೆ ಮಾಡುವುದು ಸುಲಭವಲ್ಲವೆಂಬುದೇ? ಬೇರೆ ಧರ್ಮಗಳ ದಾಳಿಗೆ ಸೋತು ಧರ್ಮ ಪರಿವರ್ತನೆ ಮಾಡಬೇಕು ಎಂಬ ಸ್ತಿಥಿ ಬಂದಾಗ, ತಮ್ಮ ಜೀವವನ್ನೇ ಬಿಟ್ಟು ಧರ್ಮ ಉಳಿಸಿಕೊಂಡವರು ಇದ್ದಾರೆ. ಇದೂ ಹಿಂದೂ ಧರ್ಮಕ್ಕೆ ಮಾತ್ರ ನಿಯಂತ್ರಿತವಲ್ಲ. ಎರಡು ಸಾವಿರ ವರ್ಷಗಳಾದರೂ ಯಾವ ಧರ್ಮವೂ ಪೂರ್ಣವಾಗಿ ನಾಶ ಹೊಂದಿಲ್ಲ.  ಯಾರೋ ಹೆಳಿದ್ದರು "ಒಬ್ಬ ಹಿಂದುವಿಗೆ, ತನ್ನ ಧರ್ಮಕ್ಕಿಂತ ಪ್ರಿಯವಾದದ್ದು ಬೀರೆ ಇಲ್ಲ". ಬಹುಷಃ ಇದೇ ಕಾರಣವಿರಬಹುದೋ?

P.S: In writing this, I don't know what I started off with and where I've ended up. Many times I would be writing along a track and end up moving along a digression. When writing in English I use it to cover more stuff and with humor. Its not easy writing in a language you are rusty writing about. Hope to do better with the passage of time.

April 5th, 2008

ನಮಸ್ಕಾರ

Share
ದಿನವು ಬೆಳಗಿನ ಜಾವ ಎಚ್ಚರಿಕೆ ಆದಾಗ, ಏನೋ ಒಂದು ಆಲಸ್ಯ. ಹಾಸಿಗೆಯಿಂದ ಎದ್ದು ಹೊಸ ದಿನವನ್ನು ಆಲಂಗಿಸುವ ಕಾತರವಾಗಲಿ ಕುತೂಹಲವಾಗಲಿ ಇಲ್ಲ. ನಿದ್ರೆಯಲ್ಲಿ ನಡೆವಂತೆ ಬೆಳಗಿನ ಕಾಫಿ ಕುಡಿದು ಸ್ನಾನಕ್ಕೆ ಹೋಗುವೆನು. ಮತ್ತೆ ಕೆಲಸಕ್ಕೆ ತೆರಳಿ ಅದೇ ಮಂಜು ಕವಿದಂತಹ ವಾತಾವರಣದಲ್ಲಿ ಕೆಲಸ ಸಾಗುವುದು. ಕೆಲಸದಲ್ಲಿ ಕುತೂಹಲ, ಹಂಬಲ ಇಲ್ಲವಂಥಲ್ಲ. ಮನದಲ್ಲಿ ಏನೋ ಆಲಸ್ಯ. ಎಷ್ಟು ದಿನ ಹೀಗೆ ಕತ್ತಲಲ್ಲಿ ನಡೆದಂತೆ ನಾನು ಜೀವನವನ್ನು ಸಾಗಿಸುವೆನೋ ತಿಳಿಯದು.
ಸಧ್ಯಕ್ಕೆ ನಾನು ಬಾಲ್ಯದಲ್ಲಿ ಕಲಿತ ಈ ಸುವರ್ಣ ಕನ್ನಡ ಭಾಷೆ, ಬರೀ ಶ್ರವ್ಯಕ-ವಚಕವಾಗಬಾರದೆಂದು ಈ ಒಂದು ಪ್ರಯತ್ನ. ಇದು ಪ್ರಯತ್ನ ಮಾತ್ರವಲ್ಲ ಒಂದು ಪ್ರಯಾಣವು ಕೂಡ. ಎಲ್ಲಿಗೆ, ನಾನು ಅರಿಯೆನು. ಈ ಪ್ರಯತ್ನದಲ್ಲಿ ಯಾವ ಹಂತಕ್ಕೆ ಸಫಲನಾಗುವೆನೋ ಸಮಯ ಮಾತ್ರ ಬಲ್ಲದು.
ಅದು ಇರಲಿ, ನನ್ನ ಒಂದು ಕಿರು ಪರಿಚಯ. ನನ್ನ ಹೆಸರು ವೈದ್ಯನಾಥನ್. ಆಪ್ತರಿಗೆ ವೈದ್ಯ. Microsoft ಎಂಬ ಕಂಪನಿಯಲ್ಲಿ ಅಮೆರಿಕಾದ ಸೀಯಟ್ಟುಲ್ ನಗರದಲ್ಲಿ ವಾಸವಾಗಿರುವೆನು. ನನ್ನ ಮಾತ್ರುಭಾಷೆ ಕನ್ನಡವಲ್ಲ, ಅದಕ್ಕೆ ವೈರಿಯಂತೆ ಜನರು ಭಾವಿಸುವ ತಮಿಳು. ಹುಟ್ಟಿ-ಬೆಳೆದಿದ್ದು ಬೆಂಗಳೂರುನಗರವಾದ್ದರಿಂದ ಕನ್ನಡ ಬಲ್ಲೆನು. ಈಗ ಅದರಲ್ಲಿ ಯಾವ ಹಂತಕ್ಕೆ ಬರೆಯಲು ನನಗೆ ಸಾಧ್ಯ, ಲಿಖಿತ ಭಾಷೆಯ ಅಭ್ಯಾಸ ಎಷ್ಟು ಜ್ನಾಪಕವಿದೆ ಎಂದು ಒಂದು ಸ್ವಪರಿಷೀಲನೆ. ನೋಡೋಣ. 

P.S: To view this better, please use IE 6.0 or higher or get the latest Mozilla 3 Beta 4. 
Powered by LiveJournal.com