ಧರ್ಮ ಎಂದರೇನು? ಸದ್ಗುಣ, ಕರ್ತವ್ಯ ಪಾಲನೆ, ಸದ್ವಿಚಾರ ಹಾಗೂ ಸಜೀವನ? ಅಥವ ಹಿಂದು, ಮುಸ್ಲಿಮ್, ಕ್ರಿಸ್ತ ಧರ್ಮಗಳಾ? ಏಕೆ Religion ಎಂಬ ಆಂಗ್ಲ ಪದಕ್ಕೆ ಕನ್ನಡದಲ್ಲಾಗಲಿ, ಸಂಸ್ಕೃತದಲ್ಲಾಗಲಿ ಯಾವ ಹಳೆಯ ಭಾರತೀಯ ಭಾಷೆಯಲ್ಲಾಗಲಿ ಒಂದು ನಿಶ್ಚಿತ ಪದವಿಲ್ಲಾ?
ಕಾರಣ ಹಿಂದು ಧರ್ಮ ತನ್ನನ್ನು ಒಂದು Religion ಎಂದು ಭಾವಿಸಿಲ್ಲವೆಂಬುದೇ? ಧರ್ಮ ಪರಿವರ್ತನೆ ಎಂಬುದು ಎಲ್ಲಾ ಧರ್ಮಗಳಲ್ಲು ಇರುವುದು. ಬೇರೆ ಧರ್ಮದವರನ್ನು ಪರಿವರ್ತಿಸಲು ಯುದ್ಧಗಳೇ ನಡೆದಿವೆ. ಕ್ರಿಸ್ತರಲ್ಲಿ crusades, ಮುಸಲ್ಮಾನರಲ್ಲಿ ಜಿಹಾದ್ ಎಂದೆಲ್ಲಾ ಕರೆಯಲ್ಪಟ್ಟು ಅದೇ ಒಂದು ಧರ್ಮವೆಂದು ಭಾವಿಸಿದ್ದಾರೆ ಹಲವು ಶತಮಾನಗಳಿಂದ. ಆದರೇ ಆ ಕಾಲವೇ ಬೇರೆ. ತಮ್ಮ ಧರ್ಮವನ್ನು ಉಳಿಸಲು ಶಸ್ತ್ರಗಳ ಉಪಯೋಗ ಆವಶ್ಯವಾಗಿತ್ತು. ಆದರೆ ಮುಂದಿನ ಪೀಡಿಗಳು ಈ ವರ್ತಮಾನದಲ್ಲೂ ಕೂಡ, ಆ ಒಂದು ವಿಷಯವನ್ನು ಅರಿತಿಲ್ಲ.
ಈಗ ನಾನು ಬರೆಯಲು ಹೊರಟಿದ್ದು ಬೇರೆ ಧರ್ಮಗಳ ಬಗ್ಗೆ ಅಲ್ಲ. ಸಜೀವನ ಹಾಗು ಕರ್ತವ್ಯ ಪಾಲನೆಯೇ ಧರ್ಮವೆಂದರೆ, ಹಲವು ರೀತಿಯ "ಧರ್ಮಗಳು" ಹೇಗೆ ಸಾಧ್ಯ? ಹಿಂದೂ ಧರ್ಮ ತನ್ನನ್ನು ಒಂದು Religion ಎಂದು ಭಾವಿಸಿಲ್ಲ. ಒಂದು ಜೀವನದ ರೀತಿ, ಸಮಾಜ ಚಾಲನೆಗೆ ಒಂದು ರೀತಿ-ನೀತಿಯ ಪುಸ್ತಕದಂತೆ ನಡೆದಿತ್ತು. ಸಮಾಜದಲ್ಲಿ ನಾಲಕ್ಕು ವರ್ಣ, ಎಲ್ಲರಿಗೂ ನಾಲಕ್ಕು ಆಶ್ರಮಗಳು. ಮುಖ್ಯವಾಗಿ ವರ್ಣಗಳಲ್ಲಿ ಭೇದವಿರಲಿಲ್ಲ. ಕೃಷ್ಣ ಗೀತೆಯಲ್ಲಿ ಹೆಳಿದಂತೆ "ನನ್ನನ್ನು ಸೇರಲು ನಿನ್ನ ಧರ್ಮವನ್ನು ಪಾಲಿಸಬೇಕು". ಬ್ರಾಹ್ಮಣನಾದಲ್ಲಿ ವಿದ್ಯಾಭ್ಯಾಸ ಪೂಜಾಕ್ರಿಯೆಗಳು, ಕ್ಷತ್ರಿಯನಾದಲ್ಲಿ ದೇಶ-ರಾಜ್ಯ ಪಾಲನೆ, ಶೂದ್ರನಾದಲ್ಲಿ ದೈಹಿಕ ಶ್ರಮದ ಕರ್ತವ್ಯಗಳು, ವೈಶ್ಯನಾದಲ್ಲಿ ವಾಣಿಜ್ಯದಲ್ಲಿ ಪಟುತ್ವ. ಯಾರೇ ಆಗಲಿ ಒಂದು ವರ್ಣದಲ್ಲಿ ಹುಟ್ಟಿದರೆ ಅದೇ ವರ್ಣದವರಾಗಿ ಸಾಯಬೆಕು ಎಂದು ಇರಲಿಲ್ಲ.
ಆದರೆ ಇದು ಒಂದು ನಿರ್ದಿಷ್ಟ ಮಾದರಿಯಾಗಿಯೆ ಉಳಿಯಿತು.ಎಷ್ಟೊಂದು ಶತಮಾನಗಳು ಸುಲಭವಾಗಿ ತಿರುಗುತ್ತಿದ್ದ ಯಂತ್ರದಂತೆ ನಡೆದಿದ್ದರು, ಮನುಷ್ಯರ ಭಾವ-ವಿಚಾರಗಳಲ್ಲಿ ನಾನೆ ಉತ್ತಮ, ಅವನು ಕೀಳು ಎಂಬ ಭಾವನೆ ಜನ್ಮಿಸಿತು. ಆ ಕಾಲದಿಂದ ಇಂದಿನ ವರೆಗು ಆ ಭಾವನೆ ಬಿಟ್ಟಿಲ್ಲ. ಹಿಂದೂ ಧರ್ಮದಲ್ಲಿ ’ದಲಿತ’ ಎಂಬ ಪದವಿಲ್ಲ. ಹೀಗಿರುವಾಗ ಅವರು ಎಲ್ಲಿಂದ ಉಂಟಾದರು? ಒಬ್ಬ ಮನುಷ್ಯ ಇನ್ನೊಬ್ಬನನ್ನು ಮುಟ್ಟಲು ಹಿಂಜರಿದಾಗ, ಅದಕ್ಕಿಂತ ಹೀನವಾದದ್ದು ಏನಾದರು ಉಂಟೆ? ಇದೇ ಕಾರಣ ಮುಸಲ್ಮಾನರ ದಾಳಿಗಳಿಂದ, ಕ್ರಿಸ್ತರ ಶಾಂತಿಪೂರ್ವಕ ಪರಿವರ್ತನಾಪ್ರಯೋಗಗಳಿಂದ ಹಿಂದೂ ಧರ್ಮದಿಂದ ಪರಿವರ್ತಿಸಿಕೊಂಡವರು ಕೋಟ್ಯಾದಿ ಜನರಿದ್ದಾರೆ. ಇಷ್ಟೆಲ್ಲಾ ಆದರೂ ಇನ್ನೂ ನೂರು ಕೊಟಿ ಜನ ಧರ್ಮ ಪಾಲನೆ, ಕ್ಷಮಿಸಿ, ಹಿಂದೂ ಧರ್ಮ ಪಾಲನೆ ಮಾಡುವರೆಂದರೆ, ಅದಕ್ಕೆ ಕಾರಣ ಏನು? ಸಮಯದೊಂದಿಗೆ ಆಚಾರ ವಿಚಾರಗಳು ಹೊಂದಿಕೊಂಡು ಬಂದಿವೆಯೆಂಬುದೇ? ಅಥವಾ ಯಾವ ಮನುಷ್ಯನನ್ನೂ ಧರ್ಮ ಪರಿವರ್ತನೆ ಮಾಡುವುದು ಸುಲಭವಲ್ಲವೆಂಬುದೇ? ಬೇರೆ ಧರ್ಮಗಳ ದಾಳಿಗೆ ಸೋತು ಧರ್ಮ ಪರಿವರ್ತನೆ ಮಾಡಬೇಕು ಎಂಬ ಸ್ತಿಥಿ ಬಂದಾಗ, ತಮ್ಮ ಜೀವವನ್ನೇ ಬಿಟ್ಟು ಧರ್ಮ ಉಳಿಸಿಕೊಂಡವರು ಇದ್ದಾರೆ. ಇದೂ ಹಿಂದೂ ಧರ್ಮಕ್ಕೆ ಮಾತ್ರ ನಿಯಂತ್ರಿತವಲ್ಲ. ಎರಡು ಸಾವಿರ ವರ್ಷಗಳಾದರೂ ಯಾವ ಧರ್ಮವೂ ಪೂರ್ಣವಾಗಿ ನಾಶ ಹೊಂದಿಲ್ಲ. ಯಾರೋ ಹೆಳಿದ್ದರು "ಒಬ್ಬ ಹಿಂದುವಿಗೆ, ತನ್ನ ಧರ್ಮಕ್ಕಿಂತ ಪ್ರಿಯವಾದದ್ದು ಬೀರೆ ಇಲ್ಲ". ಬಹುಷಃ ಇದೇ ಕಾರಣವಿರಬಹುದೋ?
P.S: In writing this, I don't know what I started off with and where I've ended up. Many times I would be writing along a track and end up moving along a digression. When writing in English I use it to cover more stuff and with humor. Its not easy writing in a language you are rusty writing about. Hope to do better with the passage of time.